ಬಲ್ಲವರೆನಿಪರು - ಕನಕದಾಸರ ಅಪರೂಪದ ಕೃತಿ
ವಿದ್ವಾನ್ ಆರ್. ಕೆ. ಶ್ರೀಕಂಠನ್ ರವರ ಧ್ವನಿಯಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ.
|| ಬಲ್ಲವರೆನಿಪರು ಎಲ್ಲಾರು ಅರಿಯರು ||ಪ||
|| ಫುಲ್ಲಲೋಚನ ಪೂರ್ಣ ಬ್ರಹ್ಮನೆಂಬುದನು ||ಅ.ಪ||
||ಅಜಜನಾಧಿಕ ಬಲ್ಲ ಅನಲಸ್ನೇಹಿತ ಬಲ್ಲ
ಗಜಚರ್ಮಾಂಬರ ಬಲ್ಲ ಗರುಡ ಬಲ್ಲ |
ಭುಜಗೇಶ್ವರ ಬಲ್ಲ ಭೂಮಿಲೋಚನ ಬಲ್ಲ
ತ್ರಿಜಗಾಧಿಪ ತ್ರಿವಿಕ್ರಮನೆಂಬುದನು ||೧||
|| ಶುಕಯೋಗೀಶ್ವರ ಬಲ್ಲ ಸುಗುಣ ನಾರದ ಬಲ್ಲ
ಅಕೂಟ ಪ್ರಹ್ಲಾದ ಬಲ್ಲ ಬಲಿಯು ಬಲ್ಲ |
ರುಕುಮಾಂಗದ ಬಲ್ಲ ಋಷಿ ಪರಾಶರ ಬಲ್ಲ
ಮಕರಕುಂಡಲಧರ ಪರಮಾತ್ಮನೆಂಬುದೆನು ||೨||
|| ಅಂಬರೀಶನು ಬಲ್ಲ ಅತ್ರಿ ಋಷಿಯು ಬಲ್ಲ
ಅಂಬರಾಧಿಪ ಬಲ್ಲ ಹಯದೇವ ಬಲ್ಲ |
ಬೆಂಬಿಡದುದ್ಧವ ಬಲ್ಲ ಬೇಡಿದ ಧ್ರುವ ಬಲ್ಲ
ಕಂಬುಚಕ್ರಾಂಕಿತ ಕರ್ಮಹರನೆಂಬುದನು ||೩||
|| ವಸಿಷ್ಠ ಮುನಿ ಬಲ್ಲ ವರ ವಿಭೀಷಣ ಬಲ್ಲ
ವಿಶಿಖಶಯನ ಬಲ್ಲ ವಿದುರ ಬಲ್ಲ |
ರಸಿಕ ವಾಲ್ಮೀಕಿ ಬಲ್ಲ ರಾಜಜನಕ ಬಲ್ಲ
ಶಶಿಮಿತ್ರನೇತ್ರ ಸರ್ವೋತ್ತಮನೆಂಬುದನು ||೪||
|| ವಾಖೆಯಾಕ್ರೂರ ಬಲ್ಲ ವಚನದಿ ಶೌನಕ ಬಲ್ಲ
ಯೋಗಿ ಕಪಿಲ ಬಲ್ಲ ಭೃಗು ಬಲ್ಲನು
ತ್ಯಾಗಿ ಧರ್ಮಜ ಬಲ್ಲ ರಣದೊಳರ್ಜುನ ಬಲ್ಲ
ಕಾಗಿನೆಲೆಯಾದಿ ಕೇಶವನೆಂಬುದನು ||೫||
ಸರಳ ಕನ್ನಡದಲ್ಲಿ ಕೃತಿಯ ಅರ್ಥ
ಪರಬ್ರಹ್ಮನೆಂದು ವೇದಗಳಲ್ಲಿ ಕರೆಸಿಕೊಳ್ಳುವ ಆ ದೇವನನ್ನು ಅನೇಕರು ತಿಳಿದಿರುವೆನೆಂದು ಭಾವಿಸುವರು, ಆದರೆ ಎಲ್ಲರೂ ತಿಳಿದಿರಲಾರರು ಎಂದು ಕನಕದಾಸರು ಹೇಳಿರುವರು.ಆ ಪರದೈವವನ್ನು ನಿಜವಾಗಿ ತಿಳಿದಿರುವ ಅನೇಕ ಪೌರಾಣಿಕ ವ್ಯಕ್ತಿಗಳನ್ನು ಈ ಕೃತಿಯ ನುಡಿಗಳು ಪಟ್ಟಿಮಾಡಿ ಉಲ್ಲೇಖಿಸುತ್ತವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ