ನೀರೇ ನೀ ಕರಿತಾರೆ - ಪುರಂದರದಾಸರು
ದೇಶ್ ರಾಗದಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ.
।। ನೀರೇ ನೀ ಕರಿತಾರೆ ಸುಂದರನ । ಮಾರಸುಂದರನ ಸುಕುಮಾರ ಶರೀರನ ।।ಪ।।
।। ಗೊಲ್ಲರ ಮನೆಯೊಳಗೆ ಇದ್ದ ಪಾಲ್ಮೊಸರ । ಮೆಲ್ಲನೆ ಮೆಲ್ಲುವ ವಲ್ಲಭ ಹರಿಯ ।।೧।।
।। ಯಾದವರೆಲ್ಲರ ಆದರಿಸಿದನ ವೇದ- । ವೇದಾಂತನ ಯಾದವ ಪ್ರಿಯನ ।।೨।।
।। ವರಗೌರಿಪುರದಲ್ಲಿ ವಾಸವಾಗಿಹನ । ವರದ ಪುರಂದರವಿಠ್ಠಲ ರಾಯನ ।।೩।।
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ