ಮಾಡು ಸಿಕ್ಕದಲ್ಲ - ಪುರಂದರದಾಸರು
ಮಾಯಮಾಳವಗೌಳ ರಾಗದಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ.
।। ಮಾಡು ಸಿಕ್ಕದಲ್ಲಾ ಮಾಡಿನ । ಗೂಡು ಸಿಕ್ಕದಲ್ಲಾ ।।ಪ।।
।। ಜೋಡುಹೆಂಡಿರಂಜಿ ಓಡಿ ಹೋಗುವಾಗ । ಗೋಡೆ ಬಿದ್ದು ಬಯಲಾಯಿತಲ್ಲ ।।ಅ.ಪ।।
।। ಎಚ್ಚರಗೊಳಲಿಲ್ಲ ಮನವೇ । ಹುಚ್ಚನಾದೆನಲ್ಲಾ ।।
।। ಅಚ್ಚಿನೊಳಗೆ ಮೆಚ್ಚು । ಮೆಚ್ಚಿನೊಳಗೆ ಅಚ್ಚು ।।
।। ಕಿಚ್ಚೆದ್ದು ಹೋಯಿತಲ್ಲಾ । ಮಾಡು ಸಿಕ್ಕದಲ್ಲಾ ।।೧।।
।। ಮುಪ್ಪು ಬಂದಿತಲ್ಲಾ ತಪ್ಪದೆ । ಪಾಯಸ ಉಣಲಿಲ್ಲಾ ।।
।। ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ । ಧೊಪ್ಪನೆ ಬಿತ್ತಂತಾಯಿತಲ್ಲಾ ।।೨।।
।। ಯೋಗವು ಬಂತಲ್ಲಾ ಅದುಪರಿ- । ಭಾಗವಾಯಿತಲ್ಲಾ ।।
।। ಭೋಗಿಶಯನ ಶ್ರೀಪುರಂದರವಿಠ್ಠಲನ । ಆಗ ನೆನೆಯಲಿಲ್ಲಾ ।।೩।।
ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ
ವ್ಯರ್ಥವಾಗಿ ಕಳೆದ ಜೀವನದ ಬಗ್ಗೆ ಪಶ್ಚಾತ್ತಾಪಪಡುವ ಚಿಂತನೆಯನ್ನು ಗೂಢವಾಗಿ ಈ ಕೃತಿಯಲ್ಲಿ ವಿವರಿಸುವ ಮೂಲಕ ನಮ್ಮೆಲ್ಲರನ್ನು ಎಚ್ಚರಿಸಿದ್ದಾರೆ ಪುರಂದರದಾಸರು.
ಪಲ್ಲವಿ: ಉತ್ಕೃಷ್ಟ ವಸ್ತುಗಳನ್ನು ಇರಿಸುವ ಮಾಡದ ಗೂಡು ಸಿಕ್ಕದಾಯಿತಲ್ಲಾ. ಒಳಾರ್ಥವಾಗಿ ಬದುಕಿನ ಸಾರ್ಥಕ್ಯ, ಮುಕ್ತಿ ಸಾಧನ ಕೈಗೆ ಎಟುಕದಾಯಿತಲ್ಲಾ. ಇಬ್ಬರು ಹೆಂಡತಿಯರು ಎಂದರೆ ಹಗಲು-ರಾತ್ರಿಗಳು ಕಾಲದ ವೇಗಕ್ಕೆ ಹೆದರಿ ಓಡುವಾಗ, ಗೋಡೆ ಬಿದ್ದು ಎಂದರೆ ದೇಹವು ಶಿಥಿಲವಾಗಿ, ಬಯಲಾಯಿತಲ್ಲಾ ಎಂದರೆ ಎಲ್ಲಾ ಇಹ ಲೋಕದ ಸುಖಗಳು ಇಲ್ಲವಾಯಿತಲ್ಲಾ ಎಂದು.
ನುಡಿ ೧: ಎಚ್ಚರಗೊಳ್ಳದೆಯೇ ಮನಸ್ಸು ಈಗ ಹುಚ್ಚುಹಿಡಿದಂತಾಯಿತಲ್ಲಾ. ಅಚ್ಚು ಎಂದರೆ ಈ ದೇಹ. ಈ ದೇಹದಿಂದ ಸಿಗುವ ಸುಖವನ್ನೇ ಬಯಸಿ, ಆ ಬಯಕೆಗಳಲ್ಲಿ ಮನಸ್ಸನ್ನು ತೊಡಗಿಸಿ, ಕೊನೆಗೆ ಕಿಚ್ಚು ಹೋಯಿತಲ್ಲ ಎಂದರೆ ದೇಹದಾರ್ಢ್ಯ ಹೋಗಿ ಮುಪ್ಪಾಯಿತಲ್ಲಾ ಎಂದು.
ನುಡಿ ೨: ಮುಪ್ಪು ಬರುವಾ ಮುನ್ನಾ ಮುಕ್ತಿಸಾಧನೆ ಮಾಡಲಿಲ್ಲವಲ್ಲಾ. ಮಾನವಜನ್ಮ ಎಂಬ ತುಪ್ಪದ ಬಿಂದಿಗೆ ವ್ಯರ್ಥವಾಗಿ ತಿಪ್ಪೆಗೆ ಬಿದ್ದಂತೆ ಆಯಿತಲ್ಲಾ.
ನುಡಿ ೩: ಮಾನವಜನ್ಮದ ಮುಕ್ತಿಸಾಧನೆಗೆ ಯೋಗ್ಯವಾದ ಶರೀರ ಬಂದಿತ್ತು. ಆದರೆ ಅದರ ಸದುಪಯೋಗವಾಗದೆಯೇ ಈ ಶರೀರ ಶಿಥಿಲವಾಗಿದೆಯಲ್ಲಾ. ಗಟ್ಟಿ-ಮುಟ್ಟಾದ ಕಾಲದಲ್ಲಿ ಶ್ರೀಹರಿಯ ಧ್ಯಾನ ಮಾಡದೆಯೇ ವ್ಯರ್ಥವಾಗಿ ಕಾಲ ಕಳೆದೆನಲ್ಲಾ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ