ರಾಮ ಎನ್ನಿರೋ - ಪುರಂದರದಾಸರು
ಈ ಕೃತಿಯನ್ನು ತಿಲ್ಲಂಗ್ ಮೊದಲಾದ ರಾಗಮಾಲಿಕೆಯಲ್ಲಿ ಇಲ್ಲಿ ಕೇಳಿ.
।। ರಾಮ ರಾಮ ರಾಮ ಸೀತಾ- । ರಾಮ ಎನ್ನಿರೋ ।।ಪ।।
।। ಅಮರಪತಿಯ ದಿವ್ಯ ನಾಮ । ಅಂದಿಗೊದಗ ಬಾರದೋ ।।ಆ.ಪ।।
।। ಭರದಿ ಯಮನ ಭಟರು ಬಂದು । ಹೊರಡಿರೆಂದು ಮೇಟೆ ಮುರಿಯೆ ।।
।। ಕೊರಳಿಗಾತ್ಮ ಸೇರಿದಾಗ । ಹರಿಯ ಧ್ಯಾನ ಒದಗದೋ ।।೧।।
।। ಇಂದ್ರಿಯಂಗಳೆಲ್ಲ ಕೂಡಿ । ಬಂದು ತನುವ ಮುಸುಕಿದಾಗ ।।
।। ಸಿಂಧುಸುತೆಯ ಪತಿಯ ನಾಮ । ಅಂದಿಗೊದಗ ಬಾರದೋ ।।೨।।
।। ಶ್ವಾಸಕೋಶವೆರಡು ಕಂಠ । ಲೇಪವಾಗಿ ಸಿಲುಕಿದಾಗ ।।
।। ವಾಸುದೇವ ಕೃಷ್ಣನ ನಾಮ । ಆ ಸಮಯಕೆ ಒದಗದೋ ।।೩।।
।। ಶೃಂಗಾರದ ದೇಹವೆಲ್ಲ । ಅಂಗ ಬಡಿದು ಮುರಿದು ಬಿದ್ದು ।।
।। ಕಂಗಳಿಗಾತ್ಮ ಸೇರಿದಾಗ । ರಂಗನ ನಾಮ ಒದಗಡೂ ।।೪।।
।। ವಾತ-ಪಿತ್ತವೆರಡು ಕೂಡಿ । ಶ್ಲೇಷ್ಮ ಬಂದು ಒದಗಿದಾಗ ।।
।। ಧಾತು ಗುಣದಿಂದಾಗ ರಘು- । ನಾಥನ ಧ್ಯಾನ ಒದಗದೋ ।।೫।।
।। ಕಲ್ಲು-ಮರಗಳಂತೆಯೇ ಜೀವ? । ನಿಲ್ಲದಂತೆ ಮರಣ ವೇಳೆ ।।
।। ಫುಲ್ಲನಾಭ ಶ್ರೀಕೃಷ್ಣನೆಂಬೋ । ಸೊಲ್ಲು ಬಾಯಿಗೊದಗದೋ ।।೬।।
।। ಕೆಟ್ಟ ಜನ್ಮದಲ್ಲಿ ಪುಟ್ಟಿ । ದುಷ್ಟಕರ್ಮ ಮಾಡಿ ದೇಹ- ।।
।। ಬಿಟ್ಟು ಹೋಗುವಾಗ ಪುರಂದರ- । ವಿಠ್ಠಲನ ನಾಮ ಒದಗದೋ ।।೭।।
ನುಡಿ ೫: ಈ ದೇಹದ ಮೂರು ದೋಷಗಳು (ವಾತ, ಪಿತ್ತ, ಕಫ/ಶ್ಲೇಷ್ಮ) ಬಾಧಿಸಿ ಸಪ್ತ ಧಾತುಗಳು (ರಸ, ರಕ್ತ, ಮಾಂಸ, ಮೂಳೆ, ಮಜ್ಜೆ, ಮೇಧಸ್ಸು, ಶುಕ್ರ) ಕುಗ್ಗಿದ ಮರಣ ಸಮಯದಲ್ಲಿ ಹರಿಸ್ಮರಣೆ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.
ನುಡಿ ೬: ಕಲ್ಲು-ಮರಗಳಂತೆಯಲ್ಲ ಈ ಜೀವ. ಸಾವು ಬರುವುದು ಖಂಡಿತ. ಆದರೆ ಸಾಯುವ ಸಮಯದಲ್ಲಿ ಕಮಲನಾಭನಾದ ಹರಿಯ ಸ್ಮರಣೆ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.
ನುಡಿ ೭: ಸಂಸಾರ ಚಕ್ರದಲ್ಲಿ ಬಿದ್ದು ಬಳಲುವಂತಹ ಜನ್ಮದಲ್ಲಿ ಬಂದು, ಅನೇಕ ಪಾಪಕರ್ಮಗಳ ಮಾಡಿ, ಕೊನೆಗೆ ಮರಣ ಸಮದಲ್ಲಿ ಹರಿಯ ಸ್ಮರಣೆ ಬರಲಿ ಎಂದರೆ ಅದು ಸಾಧ್ಯವಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.
।। ಭರದಿ ಯಮನ ಭಟರು ಬಂದು । ಹೊರಡಿರೆಂದು ಮೇಟೆ ಮುರಿಯೆ ।।
।। ಕೊರಳಿಗಾತ್ಮ ಸೇರಿದಾಗ । ಹರಿಯ ಧ್ಯಾನ ಒದಗದೋ ।।೧।।
।। ಇಂದ್ರಿಯಂಗಳೆಲ್ಲ ಕೂಡಿ । ಬಂದು ತನುವ ಮುಸುಕಿದಾಗ ।।
।। ಸಿಂಧುಸುತೆಯ ಪತಿಯ ನಾಮ । ಅಂದಿಗೊದಗ ಬಾರದೋ ।।೨।।
।। ಶ್ವಾಸಕೋಶವೆರಡು ಕಂಠ । ಲೇಪವಾಗಿ ಸಿಲುಕಿದಾಗ ।।
।। ವಾಸುದೇವ ಕೃಷ್ಣನ ನಾಮ । ಆ ಸಮಯಕೆ ಒದಗದೋ ।।೩।।
।। ಶೃಂಗಾರದ ದೇಹವೆಲ್ಲ । ಅಂಗ ಬಡಿದು ಮುರಿದು ಬಿದ್ದು ।।
।। ಕಂಗಳಿಗಾತ್ಮ ಸೇರಿದಾಗ । ರಂಗನ ನಾಮ ಒದಗಡೂ ।।೪।।
।। ವಾತ-ಪಿತ್ತವೆರಡು ಕೂಡಿ । ಶ್ಲೇಷ್ಮ ಬಂದು ಒದಗಿದಾಗ ।।
।। ಧಾತು ಗುಣದಿಂದಾಗ ರಘು- । ನಾಥನ ಧ್ಯಾನ ಒದಗದೋ ।।೫।।
।। ಕಲ್ಲು-ಮರಗಳಂತೆಯೇ ಜೀವ? । ನಿಲ್ಲದಂತೆ ಮರಣ ವೇಳೆ ।।
।। ಫುಲ್ಲನಾಭ ಶ್ರೀಕೃಷ್ಣನೆಂಬೋ । ಸೊಲ್ಲು ಬಾಯಿಗೊದಗದೋ ।।೬।।
।। ಕೆಟ್ಟ ಜನ್ಮದಲ್ಲಿ ಪುಟ್ಟಿ । ದುಷ್ಟಕರ್ಮ ಮಾಡಿ ದೇಹ- ।।
।। ಬಿಟ್ಟು ಹೋಗುವಾಗ ಪುರಂದರ- । ವಿಠ್ಠಲನ ನಾಮ ಒದಗದೋ ।।೭।।
ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ:
ಮರಣ ಕಾಲದೊಳು ಹರಿಯ ಸ್ಮರಣೆ ಬರುವುದು ಸುಲಭವಲ್ಲ. ಹಾಗಾಗಿ ಇಂದೇ ಅಮರಪತಿ/ದೇವತೆಗಳ ಒಡೆಯನಾದ ರಾಮನ ಸ್ಮರಣೆ ಮಾಡಿ ಎಂದಿದ್ದಾರೆ ಪುರಂದರದಾಸರು. (ಹಿನ್ನೆಲೆ: ಮರಣ ಕಾಲದಲ್ಲಿ ಹರಿಸ್ಮರಣೆ ಮಾಡಿದರೆ ಮುಕ್ತಿ ಸಿಗುವುದು ಎಂಬುದು ನಂಬಿಕೆ.)
ನುಡಿ ೧: ಮರಣ ಸಮಯದಿ ಯಮನ ದೂತರು ಬಂದು ಜೀವವನ್ನು ಸೆಳೆವಾಗ, ಉಸಿರು ನಿಂತು ಪ್ರಾಣ ಹೋಗುವ ಸಮಯದಲ್ಲಿ ಹರಿಯ ಧ್ಯಾನ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.
ನುಡಿ ೨: ಮರಣ ಸಮಯದಲ್ಲಿ ಇಂದ್ರಿಯಗಳೆಲ್ಲಾ ಸೆಟೆದು ಬಿದ್ದಾಗ, ದೇಹ-ಮನಸ್ಸುಗಳು ಕುಗ್ಗಿದಾಗ ಹರಿಸ್ಮರಣೆ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.
ನುಡಿ ೩: ಶ್ವಾಸಕೋಶಗಳು ಕಟ್ಟಿ ಉಸಿರು ನಿಂತಾಗ ಹರಿ ಸ್ಮರಣೆ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.
ನುಡಿ ೪: ಇಂದು ಗಟ್ಟಿಮುಟ್ಟಾದ ಈ ದೇಹ ಅಂದು, ಮರಣ ಸಮಯದಂದು, ಮುರಿದು ಬಿದ್ದಾಗ ಹರಿಸ್ಮರಣೆ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.ನುಡಿ ೫: ಈ ದೇಹದ ಮೂರು ದೋಷಗಳು (ವಾತ, ಪಿತ್ತ, ಕಫ/ಶ್ಲೇಷ್ಮ) ಬಾಧಿಸಿ ಸಪ್ತ ಧಾತುಗಳು (ರಸ, ರಕ್ತ, ಮಾಂಸ, ಮೂಳೆ, ಮಜ್ಜೆ, ಮೇಧಸ್ಸು, ಶುಕ್ರ) ಕುಗ್ಗಿದ ಮರಣ ಸಮಯದಲ್ಲಿ ಹರಿಸ್ಮರಣೆ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.
ನುಡಿ ೬: ಕಲ್ಲು-ಮರಗಳಂತೆಯಲ್ಲ ಈ ಜೀವ. ಸಾವು ಬರುವುದು ಖಂಡಿತ. ಆದರೆ ಸಾಯುವ ಸಮಯದಲ್ಲಿ ಕಮಲನಾಭನಾದ ಹರಿಯ ಸ್ಮರಣೆ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.
ನುಡಿ ೭: ಸಂಸಾರ ಚಕ್ರದಲ್ಲಿ ಬಿದ್ದು ಬಳಲುವಂತಹ ಜನ್ಮದಲ್ಲಿ ಬಂದು, ಅನೇಕ ಪಾಪಕರ್ಮಗಳ ಮಾಡಿ, ಕೊನೆಗೆ ಮರಣ ಸಮದಲ್ಲಿ ಹರಿಯ ಸ್ಮರಣೆ ಬರಲಿ ಎಂದರೆ ಅದು ಸಾಧ್ಯವಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ